ಡಯೋನ್
ಶನಿಗ್ರಹದ ಹತ್ತು ಉಪಗ್ರಹಗಳ ಪೈಕಿ ಒಂದು. ಕ್ಯಾಸಿನಿ 1684ರಲ್ಲಿ ಮೊದಲು ಆವಿಷ್ಕರಿಸಿದ. ಶನಿಯಿಂದ ಇದರ ಸರಾಸರಿ ದೂರ 2,35,000 ಮೈಲುಗಳು. ಇದರ ವ್ಯಾಸ 750 ಮೈಲುಗಳು. ನಾಕ್ಷತ್ರಿಕ ಅವಧಿ (ಅಂದರೆ ಶನಿಯ ಸುತ್ತ, ಒಂದು ಪ್ರದಕ್ಷಿಣೆ ಮುಗಿಸಲು ಬೇಕಾಗುವ ವೇಳೆ) 2 ದಿ 17 ಗಂ. 41 ಮಿ.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ